೧೯೮೯ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ, ಅಪಾರ ಜನಪ್ರಿಯತೆ ಗಳಿಸಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಕಾಲದ ಸತತ ಪ್ರದರ್ಶನ ಕಂಡ ಸಾಧನೆ ಮಾಡಿದ ಚಿತ್ರ. ರಾಘವೇಂದ್ರ ರಾಜ್‍ಕುಮಾರ್ ನಾಯಕತ್ವದ ಈ ಚಿತ್ರದ ಮೂಲಕ ಮಾಲಾಶ್ರಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ನಿರ್ದೇಶಿಸಿದವರು: ಎಂ.ಎಸ್. ರಾಜಶೇಖರ್.